Monday, March 29, 2010

ಮೈಯನೆ ಹಿಂಡಿ ನೊಂದರು ಕಬ್ಬು

ಬೆಂಗಳೂರಿನ ಬೇಸಿಗೆಯ ಸುಡುಬಿಸಿಲಿನಲ್ಲಿ ನನ್ನ ಸ್ನೆಹಿತನ ಮನೆಗೆ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ಇದ್ದ sugar cane juice ಅಂಗಡಿ ನೋಡಿದೆ, ಅದೇ ಹೊತ್ತಿಗೆ ರೇಡಿಯೊದಲ್ಲಿ ಅಣ್ಣವ್ರ ಹಾಡು ಪ್ರಸಾರವಾಗುತಿತ್ತು, ಹಾಡು -- "ಆಡಿಸಿ ನೊಡು ಬೀಳಿಸಿ ನೊಡು".

ಆ ಹಾಡಿನ ಒಂದು ಸಾಲು ಹೀಗಿದೆ... ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದೂ ...

ಕಬ್ಬಿನ ರಸವನೆಲ್ಲಾ ಹೀರಿ ಅದನ್ನು ಬಿಸಾಡುತ್ತೇವೆ, ಕಬ್ಬಿನ ಬಗ್ಗೆ ಹೆಚ್ಚಾಗಿ ಯಾರು ಯೋಚಿಸುವುದಿಲ್ಲ. ಅದೇ ರೀತಿ ಮನುಷ್ಯರನ್ನ ಹೋಲಿಸಿದರೆ ... ಹೆಚ್ಚು ವ್ಯತ್ಯಾಸವಿಲ್ಲ.
ವ್ರತ್ತಿಯಲ್ಲೇ ಆಗಲಿ, ವಯ್ಯಕ್ತಿಕವಾಗಿ ಆಗಾಲೀ ಮೇಲೇರಲು ಬೇರೆಯವರ ಸಹಾಯವನ್ನು ಪಡೆಯುತ್ತಾರೆ. ಆದರೆ ಒಮ್ಮೆ ಮೇಲೇರಿದಮೇಲೆ ತಮಗೆ ಸಹಾಯ ಮಾಡಿದವರನ್ನು ಆರಾಮಾಗಿ ಮರೆತುಬಿಡುತ್ತಾರೆ.
ಇತ್ತೀಚೆಗೆ ಹೆಚ್ಚು ಕಡಿಮೆ ಎಲ್ಲಾರೂ ಸ್ವಾರ್ಥಿಗಳಾಗಿದ್ದಾರೆ. ಸ್ವಲ್ಪ ಸ್ವಾರ್ಥತೆ ಇರಬೇಕು ಆದರೆ ಅದರ ಜೊತೆಗೆ ಕೃತಜ್ಞತೆ ಕೂಡ ಇರಬೇಕು

No comments:

Post a Comment