Wednesday, March 23, 2011

Eternal Magic

Zakir Hussain and Shivkumar Sharma


Saturday, March 19, 2011

Super Moon

ನನ್ನ camera ಕಣ್ಣಿಗೆ ಸಿಕ್ಕಿ ಬಿದ್ಧ ಶಶಿ ... 

Monday, May 3, 2010

ಒಂದು Accidentನ ಸುತ್ತ

ಎಂದಿನಂತೆ ಸುಮಾರು 9 ಘಂಟೆಗೆ officeಗೆ ಹೊರಟೆ. ಕ್ರಷ್ನ ರಾವ್ ಪಾರ್ಕ್ ಬಳಿ ಹೋಗುತ್ತಿದ್ದಾಗ, ಒಂದು ಆಟೊವನ್ನು overtake ಮಾಡುತ್ತಿದ್ದೆ. ಅಲ್ಲಿಯವರೆಗು ಒಂದು ಕಾರಿನ ಹಿಂದೆ ನಿಂತಿದ್ದ  ಆ auto , sudden ಆಗಿ right side ಗೆ ಬಂದ. ನನ್ನ bike ನ handle ಅವನ auto ಗೆ ಸಿಲುಕಿ , ನನ್ನ balance ತಪ್ಪಿ ಕೆಳಗುರುಳಿದೆನು.
ಅಲ್ಲಿದ್ದ ಹಾಗು ವಿಷಯ ತಿಳಿದವರ ಪ್ರತಿಕ್ರಿಯೆಗಳು ಹೀಗಿವೆ

ಪುಣ್ಯಾತ್ಮ : ನಾನು ಬಿದ್ದ ಸ್ವಲ್ಪ ಹೊತ್ತಿನ [seconds] ನಂತರ ಬಂದು ನನ್ನ bike ನ road side ಅಲ್ಲಿ park ಮಾಡಿ , ನನಗೆ ಕುಡಿಯೋಕ್ಕೆ ನೀರು ಕೊಟ್ರು . ನನ್ನ ಕ್ಷೇಮ ವಿಚಾರಿಸಿ, ನಾನು ಅರಾಮಾಗಿದಿನಿ ಎಂದು ಖಾತ್ರಿ ಮಾಡಿಕೊಂಡು ಹೊರಟ್ರು.

auto driver: accident ಆಗಿದ್ದೆ ಅವನಿಂದ, ಆದರೂ ಒಂದು ಸಾರಿಯಾದರು ತಿರುಗಿ ಕೂಡ ನೋಡಲಿಲ್ಲ.

ppl behind/ passer by:  insensitive people, they are not even bothered about anyone. let alone helping somebody, they treat them[accident victims] as an obstruction. B*****, they were honking continuosly.

ಎದ್ದು ಸುಧಾರಿಸಿ ಕೊಂಡು,ಬೈಕಲ್ಲೆ ಹಾಗೊ ಹೀಗೊ ಸ್ವಲ್ಪ ದೂರದವರೆಗು ಹೋದೆ, ಆಗ ತಿಳೀತು ಬ್ರೇಕ್ ಕಟ್ ಆಗಿದೆ ಅಂತ :)  ಮೆಕಾನಿಕ್ ಬಳಿ ಹೋದೆ


ಮೆಕಾನಿಕ್ : ಹೋದಾಕ್ಷಣ, ಮೊನ್ನೆ ತಾನೆ ಸರ್ವೀಸಿಂಗ್ ಮಾಡ್ಕೊಟ್ನಲ್ರಿ, ಇನ್ನೇನು  problemu ಅಂದ.
ನಡೆದನೆಲ್ಲಾ ಹೆಳ್ದೆ. ಆತ, ತನ್ನ ಬಳಿ ಇದ್ದ medicines ಗಾಯಗಳ ಮೇಲೆ ಹಾಕಿದ. ನನ್ನ ಪ್ರಥಮ ಚಿಕಿತ್ಸೆ ಮಾಡಿದ್ದು ಅವನೆ. ಈ ಆಟೊದವರು, ಅವರು ಯಾರು ಹೇಗ್ ಬಿದ್ರು, ಎಲ್ ಯಾರ್ ಸತ್ರು ಅಂತ ಏನು ನೊಡಲ್ಲ, ಸುಮ್ಮನೆ ಅವರದೇ ರೋಡು ಅಂತ ಓಡಸ್ತಾರೆ ಗಾಡಿ. ಇವ್ರ್ ಹಿಂದೆ ಮುಂದೆ ಹೋಗ್ಬೇಕಾದ್ರೆ, ಹುಶಾರಾಗಿ ಹೋಗ್ಬೇಕು ಎಂದು ಹೇಳಿ ಇತ್ತೀಚೆಗೆ ನಡೆದ ಕೆಲವು ದುರ್ಘಟನೆಗಳ ಬಗ್ಗೆ ಹೇಳಿದ

ಬೆಳಿಗ್ಗೆ ಬೆಳಿಗ್ಗೆ ಈ ಥರ ಆಗಿದೆ, ಇದು ಅಪಶಕುನರೀ, ಸುಮ್ನೆ ಮನೆಗೆ ಹೋಗಿ ಅಂದ :) ಇಲ್ಲ ಕೆಲಸ ಇದೆ ಹೋಗ್ಲೇ ಬೇಕು ಅಂದೆ, ಹಾಗಿದ್ರೆ doctor ಹತ್ರ ತೋರ್ಸಿ ಹೋಗಿ ಅಂದ.

ಅವನ ಬಲವಂತಕ್ಕೆ doctor ಬಳಿ ಹೋದೆ

Doctor: ಹೋದೊಡನೆ ಏನಾಯ್ತೊ ಎಂದರು, ಕೈಗೆ ಚೂರು ಗಾಯ ಆಗಿದೆ ಎಂದು ಕೈ ಚಾಚಿದೆ.
bandage ಹಾಕಿದರು. ಇನ್ನೇನು ಅಲ್ಲಿಂದ ಹೊರಡಬೇಕು, ಎಲ್ಲಿ ಬಿದ್ದೆ? ಎಂದು ಕೇಳಿದರು. Roadಅಲ್ಲಿ, autoದವನು ಗುದ್ಬಿಟ್ಟ ಎಂದೆ. ಹೆಳಿದ್ದೆ ತಡ tetanus injection ತಗೊಬೇಕೊ ಎಂದ್ ಹೇಳಿ injection ಚುಚ್ಚೇ ಬಿಟ್ಟರು.
 
ಇಶ್ಟೆಲ್ಲಾ ಆದ ಮೇಲೆ officeಗೆ ಹೋದೆ, ಅಲ್ಲೀಯೂ ನಡೆದೆಲ್ಲಾ ಕಥೆ ಹೇಳಬೇಕಾಯಿತು. ಸಹ autoದವರ ಬಗ್ಗೆ ಎಚ್ಚರವಹಿಸಲು ಸಲಹೆ ನೀಡಿದರು.

ಆದ ಒಂದು ಘಟನೆಯ ಸುತ್ತವಿರುವ ವಿವಿಧ ಜನರ, ಬಗೆ ಬಗೆಯ ಪ್ರತಿಕ್ರಿಯಗಳು :) 

Wednesday, April 21, 2010

ಸುಮ್ಮನೆ ಯಾಕೆ ಬಂದೆ, ಮಿಂಚಂತೆ ನನ್ನ ಮುಂದೆ

Was very impressed by this song and wanted to sing along while listening to it, searched the net for the lyrics, but didnt find it, so thought of typing down the lyrics myself.

ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ - ಜೀವ ಚಿತ್ರದ ಹಾಡು.

Singers: Sonu Nigam and Shruthi [new comer]
Lyrics: Kaviraj

ಸುಮ್ಮನೆ ಯಾಕೆ ಬಂದೆ, ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ, ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ, ನಿನ್ನನ್ನೂ ನೋಡದೆ |2|

ಬೊಂಬೆಗೆ ಜೀವ ತಂದು, ಆ ಬ್ರಹ್ಮನು ನನಗೆಂದು
ಭೂಮಿಗೆ ತಂದನು ನಿನ್ನನ್ನು ಇಂದು

ಹೆ|| ಜನಿಸುವೆ ಜನಿಸುವೆ ಪುನಪುನಃ,
        ಜೊತೆಯಲಿ ಬದುಕಲು ಇದೆ ತರಹ

ಜಾರದ ಹಾಗೆ ಇಂದು, ಕಣ್ಣೀರ ಬಿಂದು ಒಂದು
ನಾ ನಿನ್ನ ಕಾಯುವೆ, ಜೊತೆಯಾಗಿ ಇಂದು

ಹೆ|| ಎದೆ ಬಡಿತ
       ಇದೆ ಸತತ
       ನಿನ್ನನ್ನೇ ಕೂಗುತಾ

ಸುಮ್ಮನೆ ಯಾಕೆ ಬಂದೆ, ಮಿಂಚಂತೆ ನನ್ನ ಮುಂದೆ

ಮೈಯಲಿ ನೂರು ರಾಗ, ನೀ ನನ್ನ ಸೋಕಿದಾಗ
ಬಳಿಯಲ್ಲಿ ನೀನು ಬರಲು , ನಾ ತೆಲುವೆಘಾ

ಹೆ||  ದಿನ ದಿನ
        ದಿನ ದಿನ ಕನವರತ
       ಜೊತೆಯಿರು ಜೊತೆಯಿರು
       ನಗು ನಗುತ

ನಿನ್ನೆದೆ ಗೂಡಲ್ಲೀಗ, ನನಗೊಂದು ಪುಟ್ಟ ಜಾಗ
ನೀ ನೀಡು ಸಾಕು , ನನಗೆ ಇನ್ನೇಕೆ ಲೋಕಾ

ಹೆ|| ನಿನ್ನ ಪಡೆದೆ
       ಅನಿಸುತಿದೆ
       ಈ ಜನ್ಮ ಸಾರ್ಥಕ

ಸುಮ್ಮನೆ ಯಾಕೆ ಬಂದೆ, ಮಿಂಚಂತೆ ನನ್ನ ಮುಂದೆ
ನಿನ್ನನು ನೋಡಿದಂದೆ ನಾ ಬಿದ್ದೆ ನಿನ್ನ ಹಿಂದೆ
ಬರದೀಗ ನಂಗೆ ನಿದ್ದೆ, ನಿನ್ನನ್ನೂ ನೋಡದೆ

ಹೆ||  ಸುಮ್ಮನೆ ಯಾಕೆ ಬಂದೆ
        ನಾ ನಿನ್ನ ಕಣ್ಣ ಮುಂದೆ

Click on the link below to listen to this song :)

ಈ ಹಾಡನ್ನು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ

Monday, March 29, 2010

ಮೈಯನೆ ಹಿಂಡಿ ನೊಂದರು ಕಬ್ಬು

ಬೆಂಗಳೂರಿನ ಬೇಸಿಗೆಯ ಸುಡುಬಿಸಿಲಿನಲ್ಲಿ ನನ್ನ ಸ್ನೆಹಿತನ ಮನೆಗೆ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ಇದ್ದ sugar cane juice ಅಂಗಡಿ ನೋಡಿದೆ, ಅದೇ ಹೊತ್ತಿಗೆ ರೇಡಿಯೊದಲ್ಲಿ ಅಣ್ಣವ್ರ ಹಾಡು ಪ್ರಸಾರವಾಗುತಿತ್ತು, ಹಾಡು -- "ಆಡಿಸಿ ನೊಡು ಬೀಳಿಸಿ ನೊಡು".

ಆ ಹಾಡಿನ ಒಂದು ಸಾಲು ಹೀಗಿದೆ... ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದೂ ...

ಕಬ್ಬಿನ ರಸವನೆಲ್ಲಾ ಹೀರಿ ಅದನ್ನು ಬಿಸಾಡುತ್ತೇವೆ, ಕಬ್ಬಿನ ಬಗ್ಗೆ ಹೆಚ್ಚಾಗಿ ಯಾರು ಯೋಚಿಸುವುದಿಲ್ಲ. ಅದೇ ರೀತಿ ಮನುಷ್ಯರನ್ನ ಹೋಲಿಸಿದರೆ ... ಹೆಚ್ಚು ವ್ಯತ್ಯಾಸವಿಲ್ಲ.
ವ್ರತ್ತಿಯಲ್ಲೇ ಆಗಲಿ, ವಯ್ಯಕ್ತಿಕವಾಗಿ ಆಗಾಲೀ ಮೇಲೇರಲು ಬೇರೆಯವರ ಸಹಾಯವನ್ನು ಪಡೆಯುತ್ತಾರೆ. ಆದರೆ ಒಮ್ಮೆ ಮೇಲೇರಿದಮೇಲೆ ತಮಗೆ ಸಹಾಯ ಮಾಡಿದವರನ್ನು ಆರಾಮಾಗಿ ಮರೆತುಬಿಡುತ್ತಾರೆ.
ಇತ್ತೀಚೆಗೆ ಹೆಚ್ಚು ಕಡಿಮೆ ಎಲ್ಲಾರೂ ಸ್ವಾರ್ಥಿಗಳಾಗಿದ್ದಾರೆ. ಸ್ವಲ್ಪ ಸ್ವಾರ್ಥತೆ ಇರಬೇಕು ಆದರೆ ಅದರ ಜೊತೆಗೆ ಕೃತಜ್ಞತೆ ಕೂಡ ಇರಬೇಕು

Thursday, March 25, 2010

and they are from Venus :)

it was a saturday evening and we had set out to check the India's largest mall. Since the mall wasnt officially opened yet,only a few stores were operational and the rest were still getting ready to welcome the customers, hence the mall was less crowded.

At the atrium of the mall, an MC was making children to play a few games. One of the games was similar to the "ringa ringa", where they have to hold hands and form a big circle. One boy had held a hand of a guy on his right and was looking to hold another's hand, a girl came next to him to hold his hand and that boy quietly released the boy's hand he was holding and got joined the circle inbetween 2 boys :).

We three were observing this, and all of us, accompanied with laughter said in a unison, "he must from our school" :) . And off we were talking about the school days...
ನಮ್ ಕ್ಲಾಸಲ್ಲಿ ಇದ್ದಿದ್ದು 36 ಹುಡುಗ್ರು ಮತ್ತೆ 14 ಹುಡುಗೀರು. ಇಬ್ಬರ ಮಧ್ಯ ಎಣ್ಣೆ-ಸೀಗೆಕಾಯಿ ಸಂಬಂಧ.  ಯಾರಾದರು ಹುಡುಗಿ ಜೊತೆ ಮಾತಾಡಿದಲ್ಲಿ, ಅಯ್ಯೋ ಅವನು ಹುಡುಗಿ ಜೊತೆ ಮಾತಾಡಿದ ಅವನ ಜೊತೆ ಮಾತಾಡಬೇಡ ಅನ್ನೋ level ಇತ್ತು :) . ಕ್ಲಾಸಲ್ಲಿ ಜಾಸ್ತಿ ಮಾತಾಡದ್ರೆ punishment ಗೆ ಹುಡುಗೀರ್ ಮಧ್ಯ ಕೂಡಸ್ತಾ ಇದ್ರೂ. bench ಅಲ್ಲಿ ಕೂತ್ಕೊಳ್ಳೋಕೆ ಜಾಗ ಇಲ್ಲದಿದ್ದರೂ ಮಧ್ಯದಲ್ಲಿ bag ಇಟ್ಟುಕೊಂಡು ಕೂತ್ಕೊತಿದ್ವಿ. Guess we knew at that time itself that the girls are from venus ;)
ಇದು ನಮ್ ಕ್ಲಾಸ್ ಹುಡುಗ್ರು ಕಥೆ ಆದ್ರೆ , ಪಕ್ಕದ್ ಕ್ಲಾಸವ್ರು ತದ್ವಿರುದ್ದ :) ಅಲ್ಲಿ 2-3 ಪ್ರೇಮ ಕಥೆಗಳು ನಡೀತಿತ್ತು :) 
ಹೀಗೆ ಒಮ್ಮೆ ನಮಗೆ ಸುದ್ದಿ ತಿಳೀತು. ಸುದ್ದಿ - ಪಕ್ಕದ್ ಕ್ಲಾಸ್ ಹುಡುಗ, ಒಂದು ಹುಡುಗಿಗೆ "i love you" ಅಂತ ಹೇಳಿದನಂತೆ. ಈ ಸುದ್ದಿ ಕೇಳಿದ್ ತಕ್ಷಣ ನಾವುಗಳು ಮೂಗಿನ ಮೇಲೆ ಕೈ ಇಟ್ಟು, ಅಯ್ಯೂ......... :) :)

ಹೀಗೆ ಆ ದಿನಗಳನ್ನು ನೆನೆಯುತ್ತಾ ನಗೆಹಬ್ಬವ ಆಚರಿಸುತ್ತಿದ್ದೆವು :) ಅಷ್ಟರಲ್ಲೇ, ನಮಗೆ ಹೊಳೆದಿದ್ದು ಇದು ... we were also Intelligent.

Tuesday, March 16, 2010

Blogಆದಿ :)


ಈ blog ನ ಸುಮಾರು ಒಂದು ವರ್ಷದ ಹಿಂದೆ create ಮಾಡಿದ್ಧೆ, ಆದರೆ,  ಇದರ ಮೂಲಕ ಹಂಚಿಕೊಳ್ಳಬೇಕು ಎಂದಿದ್ಧ ನೂರಾರು ಮನದಂಗಳದ ಮಾತುಗಳು, ಹಲವಾರು ಕಾರಣಗಳಿಂದ ಮನದಲ್ಲಿಯೇ ಉಳಿದುಬಿಟ್ಟಿದೆ. ಇತ್ತೀಚೆಗೆ ನನ್ನ ಸ್ನೇಹಿತನೊಬ್ಬನ Blog ಅನ್ನು ಓದಿ ಪುನಃ blogging ಮಾಡಲು ಪ್ರೇರೇಪಿತನಾಗಿದ್ದೇನೆ :) ಈ ತರಹದ ಪ್ರೇರೇಪಣೆ ಬಹಳಷ್ಟು ಬಾರಿ ಆಗಿದೆ, ಆದರೆ ಅದು ಕೇವಲ 2 -3 ದಿನಗಳಿಗೆ ಮಾತ್ರ ಸೀಮಿತವಾಗಿತ್ತು :)  ಈ ಬಾರಿಯಿಂದನಾದರೂ ನಿರಂತರವಾಗಿ  ಮನದಂಗಳದ ಮಾತುಗಳು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ :)   ಹೊಸ ಯುಗದ ಆದಿಯಂದೆ ನನ್ನ ಹೊಸ blog ನ ಆದಿ :)
PS : ಭಯ ಪಡಬೇಡಿ ಇಷ್ಟು ಸ್ಪಷ್ಟ ಕನ್ನಡದಲ್ಲಿ ಬರೆಯುವುದಿಲ್ಲ, ಬೆಂಗಳೂರಿಗರ ಆಡುಭಾಷೆಯಲ್ಲೇ ಬರೆಯುವೆ :)

ಹೊಸ ವಸಂತ,
ಹೊಸ ದಿನ ,
ಹೊಸ ಚಿಗುರು,
ಹೊಸ ಇಂಚರ 
ಇವೆಲ್ಲವ ಮೂಲಕ ಪ್ರಕೃತಿಯು ಹೊಸ ಸಂವತ್ಸರವ ಆಹ್ವಾನಿಸಿದೆ :)

ಹೊಸ ಕನಸು,
ಹೊಸ ದಾರಿ,
ಹೊಸ ಜೀವನ
ಇವೆಲ್ಲವ ಮೂಲಕ ನಾವು ಹೊಸ ಸಂವತ್ಸರವ ಆಹ್ವಾನಿಸೋಣ :)


'ಬೇವಿನ' ನೆನಪುಗಳು ಮರೆಯಾಗಲಿ
'ಬೆಲ್ಲದ' ನೆನಪುಗಳು ಚಿರವಾಗಲಿ
ವಿಕೃತಿ ನಾಮ ಸಂವತ್ಸರದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ :)
 
ಯುಗಾದಿಯ ಹಾರ್ಧಿಕ ಶುಭಾಶಯಗಳು :)