Monday, May 3, 2010

ಒಂದು Accidentನ ಸುತ್ತ

ಎಂದಿನಂತೆ ಸುಮಾರು 9 ಘಂಟೆಗೆ officeಗೆ ಹೊರಟೆ. ಕ್ರಷ್ನ ರಾವ್ ಪಾರ್ಕ್ ಬಳಿ ಹೋಗುತ್ತಿದ್ದಾಗ, ಒಂದು ಆಟೊವನ್ನು overtake ಮಾಡುತ್ತಿದ್ದೆ. ಅಲ್ಲಿಯವರೆಗು ಒಂದು ಕಾರಿನ ಹಿಂದೆ ನಿಂತಿದ್ದ  ಆ auto , sudden ಆಗಿ right side ಗೆ ಬಂದ. ನನ್ನ bike ನ handle ಅವನ auto ಗೆ ಸಿಲುಕಿ , ನನ್ನ balance ತಪ್ಪಿ ಕೆಳಗುರುಳಿದೆನು.
ಅಲ್ಲಿದ್ದ ಹಾಗು ವಿಷಯ ತಿಳಿದವರ ಪ್ರತಿಕ್ರಿಯೆಗಳು ಹೀಗಿವೆ

ಪುಣ್ಯಾತ್ಮ : ನಾನು ಬಿದ್ದ ಸ್ವಲ್ಪ ಹೊತ್ತಿನ [seconds] ನಂತರ ಬಂದು ನನ್ನ bike ನ road side ಅಲ್ಲಿ park ಮಾಡಿ , ನನಗೆ ಕುಡಿಯೋಕ್ಕೆ ನೀರು ಕೊಟ್ರು . ನನ್ನ ಕ್ಷೇಮ ವಿಚಾರಿಸಿ, ನಾನು ಅರಾಮಾಗಿದಿನಿ ಎಂದು ಖಾತ್ರಿ ಮಾಡಿಕೊಂಡು ಹೊರಟ್ರು.

auto driver: accident ಆಗಿದ್ದೆ ಅವನಿಂದ, ಆದರೂ ಒಂದು ಸಾರಿಯಾದರು ತಿರುಗಿ ಕೂಡ ನೋಡಲಿಲ್ಲ.

ppl behind/ passer by:  insensitive people, they are not even bothered about anyone. let alone helping somebody, they treat them[accident victims] as an obstruction. B*****, they were honking continuosly.

ಎದ್ದು ಸುಧಾರಿಸಿ ಕೊಂಡು,ಬೈಕಲ್ಲೆ ಹಾಗೊ ಹೀಗೊ ಸ್ವಲ್ಪ ದೂರದವರೆಗು ಹೋದೆ, ಆಗ ತಿಳೀತು ಬ್ರೇಕ್ ಕಟ್ ಆಗಿದೆ ಅಂತ :)  ಮೆಕಾನಿಕ್ ಬಳಿ ಹೋದೆ


ಮೆಕಾನಿಕ್ : ಹೋದಾಕ್ಷಣ, ಮೊನ್ನೆ ತಾನೆ ಸರ್ವೀಸಿಂಗ್ ಮಾಡ್ಕೊಟ್ನಲ್ರಿ, ಇನ್ನೇನು  problemu ಅಂದ.
ನಡೆದನೆಲ್ಲಾ ಹೆಳ್ದೆ. ಆತ, ತನ್ನ ಬಳಿ ಇದ್ದ medicines ಗಾಯಗಳ ಮೇಲೆ ಹಾಕಿದ. ನನ್ನ ಪ್ರಥಮ ಚಿಕಿತ್ಸೆ ಮಾಡಿದ್ದು ಅವನೆ. ಈ ಆಟೊದವರು, ಅವರು ಯಾರು ಹೇಗ್ ಬಿದ್ರು, ಎಲ್ ಯಾರ್ ಸತ್ರು ಅಂತ ಏನು ನೊಡಲ್ಲ, ಸುಮ್ಮನೆ ಅವರದೇ ರೋಡು ಅಂತ ಓಡಸ್ತಾರೆ ಗಾಡಿ. ಇವ್ರ್ ಹಿಂದೆ ಮುಂದೆ ಹೋಗ್ಬೇಕಾದ್ರೆ, ಹುಶಾರಾಗಿ ಹೋಗ್ಬೇಕು ಎಂದು ಹೇಳಿ ಇತ್ತೀಚೆಗೆ ನಡೆದ ಕೆಲವು ದುರ್ಘಟನೆಗಳ ಬಗ್ಗೆ ಹೇಳಿದ

ಬೆಳಿಗ್ಗೆ ಬೆಳಿಗ್ಗೆ ಈ ಥರ ಆಗಿದೆ, ಇದು ಅಪಶಕುನರೀ, ಸುಮ್ನೆ ಮನೆಗೆ ಹೋಗಿ ಅಂದ :) ಇಲ್ಲ ಕೆಲಸ ಇದೆ ಹೋಗ್ಲೇ ಬೇಕು ಅಂದೆ, ಹಾಗಿದ್ರೆ doctor ಹತ್ರ ತೋರ್ಸಿ ಹೋಗಿ ಅಂದ.

ಅವನ ಬಲವಂತಕ್ಕೆ doctor ಬಳಿ ಹೋದೆ

Doctor: ಹೋದೊಡನೆ ಏನಾಯ್ತೊ ಎಂದರು, ಕೈಗೆ ಚೂರು ಗಾಯ ಆಗಿದೆ ಎಂದು ಕೈ ಚಾಚಿದೆ.
bandage ಹಾಕಿದರು. ಇನ್ನೇನು ಅಲ್ಲಿಂದ ಹೊರಡಬೇಕು, ಎಲ್ಲಿ ಬಿದ್ದೆ? ಎಂದು ಕೇಳಿದರು. Roadಅಲ್ಲಿ, autoದವನು ಗುದ್ಬಿಟ್ಟ ಎಂದೆ. ಹೆಳಿದ್ದೆ ತಡ tetanus injection ತಗೊಬೇಕೊ ಎಂದ್ ಹೇಳಿ injection ಚುಚ್ಚೇ ಬಿಟ್ಟರು.
 
ಇಶ್ಟೆಲ್ಲಾ ಆದ ಮೇಲೆ officeಗೆ ಹೋದೆ, ಅಲ್ಲೀಯೂ ನಡೆದೆಲ್ಲಾ ಕಥೆ ಹೇಳಬೇಕಾಯಿತು. ಸಹ autoದವರ ಬಗ್ಗೆ ಎಚ್ಚರವಹಿಸಲು ಸಲಹೆ ನೀಡಿದರು.

ಆದ ಒಂದು ಘಟನೆಯ ಸುತ್ತವಿರುವ ವಿವಿಧ ಜನರ, ಬಗೆ ಬಗೆಯ ಪ್ರತಿಕ್ರಿಯಗಳು :)